ಇಂದು ಸಂಜೆ ಜೆಎನ್ ಯುನಲ್ಲಿ ಒಂದು ಸಣ್ಣ ಭಾಷಣ, ಉಮಾಪತಿ ಮತ್ತು ರೇಣುಕಾ ಅವರ ಜತೆ ಸೆಲ್ಪಿ, ದೆಹಲಿಯಲ್ಲಿನ 'ಕನ್ನಡದ ರಾಯಭಾರಿ' ಪ್ರೊ.ಪುರುಷೋತ್ತಮ್ ಬಿಳಿಮಲೆಯವರ ಅಧ್ಯಕ್ಷತೆಯ ಕನ್ನಡ ಭಾಷಾ ಪೀಠಕ್ಕೆ ಭೇಟಿ. ಇಳಿಸಂಜೆ ಒಂದು ದೀರ್ಘ ಹರಟೆ.ದೆಹಲಿಯಲ್ಲಿ ಕಳೆದ ಹಳೆಯ ದಿನಗಳ ನೆನಪುಗಳ ಮೆರವಣಿಗೆ. ವಿಮಾನ ತಪ್ಪಿಹೋಗಬಹುದೆಂಬ ಆತಂಕದಲ್ಲಿ ಪ್ರೆಸ್ ಕ್ಲಬ್ ಗೆ ಹೋಗಲಾಗದ ಪರಿತಾಪ.
Showing posts with label ದೆಹಲಿ. Show all posts
Showing posts with label ದೆಹಲಿ. Show all posts
Friday, March 17, 2017
ದೆಹಲಿ ಜೆ.ಎನ್.ಯು
ಇಂದು ಸಂಜೆ ಜೆಎನ್ ಯುನಲ್ಲಿ ಒಂದು ಸಣ್ಣ ಭಾಷಣ, ಉಮಾಪತಿ ಮತ್ತು ರೇಣುಕಾ ಅವರ ಜತೆ ಸೆಲ್ಪಿ, ದೆಹಲಿಯಲ್ಲಿನ 'ಕನ್ನಡದ ರಾಯಭಾರಿ' ಪ್ರೊ.ಪುರುಷೋತ್ತಮ್ ಬಿಳಿಮಲೆಯವರ ಅಧ್ಯಕ್ಷತೆಯ ಕನ್ನಡ ಭಾಷಾ ಪೀಠಕ್ಕೆ ಭೇಟಿ. ಇಳಿಸಂಜೆ ಒಂದು ದೀರ್ಘ ಹರಟೆ.ದೆಹಲಿಯಲ್ಲಿ ಕಳೆದ ಹಳೆಯ ದಿನಗಳ ನೆನಪುಗಳ ಮೆರವಣಿಗೆ. ವಿಮಾನ ತಪ್ಪಿಹೋಗಬಹುದೆಂಬ ಆತಂಕದಲ್ಲಿ ಪ್ರೆಸ್ ಕ್ಲಬ್ ಗೆ ಹೋಗಲಾಗದ ಪರಿತಾಪ.Friday, February 13, 2015
ದೆಹಲಿ ಬಗ್ಗೆ ಬರೆದ ಅಂಕಣ
ಬೇರೆ ಬೇರೆ ಕಾರಣಗಳಿಗಾಗಿ ಮೂರು ನಗರಗಳು ನನ್ನನ್ನು ಎಡೆಬಿಡದೆ ಕಾಡುತ್ತಿವೆ . ಮೊದಲನೆಯದು ನನ್ನ ಹುಟ್ಟೂರು ಮುಂಬೈ, ಎರಡನೆಯದು ಈಗ ವಾಸಿಸುತ್ತಿರುವ ಬೆಂಗಳೂರು ಮೂರನೆಯದು ಒಂಬತ್ತು ವರ್ಷಗಳ ನನ್ನ ಮನೆಯಾಗಿದ್ದ ದೆಹಲಿ. ಇತ್ತೀಚಿನ ದೆಹಲಿಯಲ್ಲಿನ ರಾಜಕೀಯ ಬೆಳವಣಿಗೆ ನನ್ನಲ್ಲಿ ಮತ್ತೆ ದೆಹಲಿಯ ಗುಂಗು ಹುಟ್ಟಿಸಿದೆ. ನಾನು ದೆಹಲಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇ ರಾಮಮನೋಹರ ಲೋಹಿಯಾ ಅವರು ದೆಹಲಿ ಬಗ್ಗೆ ಬರೆದ ಪ್ರಬಂಧವೊಂದರ ಮೂಲಕ. ದೆಹಲಿಯ ಬಗ್ಗೆ ಆಸಕ್ತಿಯಿದ್ದವರು ದಯವಿಟ್ಟು ಅದನ್ನು ಓದಿ. ದೆಹಲಿಗೆ ವಿದಾಯ ಹೇಳಿ ಕರ್ನಾಟಕಕ್ಕೆ ಹಿಂದಿರುಗಿದಾಗ ನಾನು ಬರೆದಿದ್ದ ಅಂಕಣವನ್ನು ಸುಮ್ಮನೆ ಆಸಕ್ತರ ಓದಿಗಾಗಿ ಇಲ್ಲಿ ಅಂಟಿಸಿರುವೆ. ದೆಹಲಿ ನನಗೆ ಈಗಲೂ ಪೂರ್ಣವಾಗಿ ಅರ್ಥವಾಗಿಲ್ಲ, ನಿಮಗೇನಾದರೂ ಅರ್ಥವಾಗುತ್ತೋ ನೋಡಿ.
Subscribe to:
Posts (Atom)

