ನಮ್ಮಂತಹ
ಅಬ್ಬೆಪಾರಿಗಳನ್ನೆಲ್ಲ ಗುರುವಾಗಿ ಸಲುಹಿದ ವಡ್ಡರ್ಸೆ ರಘುರಾಮ ಶೆಟ್ಟಿಯವರ 'ಕ್ಯಾಮೆರಾ'
ಕಣ್ಣಿಗೆ ಬಿದ್ದ ಹಳ್ಳಿಗಾಡಿನ ಪ್ರತಿಭೆ ಕೇಶವ ವಿಟ್ಲ. ಆ ಕಾಲದ ಬಾಲಪ್ರತಿಭೆ ಇಂದು
ಅಂತರರಾಷ್ಟ್ರೀಯ ಪೋಟೋಗ್ರಾಪರ್ ಗಳ ಹೆಗಲಿಗೆ ಸಮನಾಗಿ ನಿಲ್ಲುವಂತಹ ದೈತ್ಯ ಪ್ರತಿಭೆಯಾಗಿ
ಬೆಳೆದಿದ್ದಾನೆ.
ವಡ್ಡರ್ಸೆಯವರು ಯಾರ ತಲೆಗೆ ಕೈ ಇಟ್ಟಿದ್ದರೋ ಅವರ್ಯಾರೂ ಕಳೆದು ಹೋಗಿಲ್ಲ. ವೃತ್ತಿಯಲ್ಲಿ ಕಸುಬುಗಾರಿಕೆ, ಹೊಸ ಸವಾಲುಗಳನ್ನು ಹುಡುಕಿಕೊಂಡು ಹೋಗುವ ಸಾಹಸ ಮತ್ತು ಜನಪರವಾದ ಕಾಳಜಿ ವಡ್ಡರ್ಸೆಯವರ ಶಿಷ್ಯಕೋಟಿಯಲ್ಲಿ ಕಾಣಬಹುದಾದ ಸಾಮಾನ್ಯ ಗುಣಗಳು. ಇವೆಲ್ಲ ಗುಣಲಕ್ಷಣಗಳು ಈ ವಿಟ್ಲ ನೆಂಬ 'ಬಾಲಕ'ನಲ್ಲಿದೆ.
ಇಂದು ಈತನ ಮಹತ್ವಾಕಾಂಕ್ಷೆಯ ಚಿತ್ರಪುಸ್ತಕ ಬಿಡುಗಡೆ. ಈ ಪುಸ್ತಕ ನಮ್ಮನ್ನು ಬೆರಗಿನ ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ತನ್ನ ಬಾಲಚೇಷ್ಠೆಯ ನಡುವೆಯೂ ಹತ್ತು ವರ್ಷಗಳ ಕಾಲ ನಡೆಸಿದ ತಪಸ್ಸಿನ ಫಲ ಈ ಪುಸ್ತಕ. ಇಂದು ಸಂಜೆ ನಾಲ್ಕು ಗಂಟೆಗೆ ಚಿತ್ರಕಲಾ ಪರಿಷತ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದನ್ನು ಬಿಡುಗಡೆಗೊಳಿಸಲಿದ್ದಾರೆ. ಬನ್ನಿ, ಈ ಸಾಹಸಿಯನ್ನು ಹರಸಿ ಬೆಂಬಲಿಸಿ.