ಇತಿಹಾಸಕ್ಕೆ ಸಾಕ್ಷಿಯಾಗುವುದು ಇದ್ದೇ ಇರುತ್ತದೆ, ಒಮ್ಮೊಮ್ಮೆ ಇತಿಹಾಸದ ಭಾಗವಾಗುವಂತಹ ಅವಕಾಶವೂ ಒದಗಿಬರುತ್ತದೆ. ಇಂದು ಸಂಜೆ ವಿಧಾನಸಭೆಯ ವಿಶೇಷ ಅಧಿವೇಶನ ಮುಗಿಸಿ ನಿರ್ಗಮಿಸುತ್ತಿದ್ದಾಗ ಒಂದು ಕ್ಷಣ ಇಂತಹದ್ದೊಂದು ಭಾವನೆ ನನ್ನೊಳಗೆ ಸುಳಿದಾಡಿದ್ದು ನಿಜ. ಹೌದು ನನಗೆ ಸಿಕ್ಕಾಪಟ್ಟೆ ಖುಷಿಯಾದಾಗ ನಾನು ಏನು ಮಾಡ್ತೇನೆ ಎನ್ನುವುದು ನನ್ನನ್ನು ಪ್ರೀತಿಸುವ, ದ್ವೇಷಿಸುವ ಎಲ್ಲ ಸ್ನೇಹಿತರಿಗೂ ಈಗ ಗೊತ್ತಾಗಿಬಿಟ್ಟಿದೆ. ಆದರೇನು ಮಾಡುವುದು? ಮನೆಯಲ್ಲಿ ಫ್ರಿಜ್ ಖಾಲಿಯಾಗಿತ್ತು, ಮಾರ್ಕೆಟ್ ಬಂದ್ ಆಗಿತ್ತು. ನಾಳೆ ಹುಡುಕಿಕೊಂಡು ಹೋಗಬೇಕು ನನ್ನಿಷ್ಟದ ಕಾಣೆಮೀನಿಗಾಗಿ.
No comments:
Post a Comment