Tuesday, September 20, 2016

ಕೆಲವರ ಜತೆ ಜಗಳಮಾಡಿದರೂ ನಮಗೆ ಲಾಭ ಇದೆ.

ಕಾವೇರಿ ನೀರು ಹಂಚಿಕೆಯ ಕುರಿತ ದೇವೇಗೌಡರ ಕೆಲವು ನಿಲುವುಗಳ ಬಗ್ಗೆ ನನಗೆ ತಕರಾರಿದೆ. ಆದರೆ ನೀರಾವರಿ ವಿಷಯದಲ್ಲಿ ಅವರ ಜ್ಞಾನ ನನ್ನನ್ನು ಬೆರಗುಗೊಳಿಸಿದೆ. ಕೆಲವರ ಜತೆ ಜಗಳಮಾಡಿದರೂ ನಮಗೆ ಲಾಭ ಇದೆ. ಅಂತಹವರಲ್ಲಿ ಒಬ್ಬರು ಗೌಡರು. ಇದು ನನ್ನ ಅನುಭವ.



ಕೆಲವು ವಿಷಯಗಳನ್ನು ಹೇಳಬೇಕೋ ಬೇಡವೋ ಎನ್ನುವುದು ನನಗೆ ಇನ್ನೂ ಗೊತ್ತಿಲ್ಲ, ಹೇಳಿಯೇ ಬಿಡುತ್ತೇನೆ..15000 ಕ್ಯುಸೆಕ್ಸ್ ನೀರುಹರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ದಿನದಿಂದ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಗಳ ಜತೆ ಸಂಪರ್ಕದಲ್ಲಿದ್ದಾರೆ. ಒಮ್ಮೊಮ್ಮೆ ದಿನಕ್ಕೆರಡು ಬಾರಿ ಮಾತನಾಡಿದ್ದಾರೆ. ಈ ಮಾತುಕತೆ ೧೫ ನಿಮಿಷಕ್ಕಿಂತ ಮೊದಲು ಕೊನೆಗೊಂಡಿದ್ದೇ ಕಡಿಮೆ.

No comments:

Post a Comment