ಪ್ರಜಾವಾಣಿಯ ಹಿರಿಯ ವರದಿಗಾರರಾದ,ನನ್ನ ಕಿರಿಯ ಮಿತ್ರ ವಿ.ಎಸ್.ಸುಬ್ರಹ್ಮಣ್ಯ ಮಂತ್ರಮಾಂಗಲ್ಯ ವಚನ ಸ್ವೀಕಾರದ ಮೂಲಕ ಸರಳವಾಗಿ ಮದುವೆಯಾಗಿದ್ದಾರೆ. ಮದುವೆ ನಡೆದದ್ದು ಕುಪ್ಪಳ್ಳಿಯಿಂದ ಸುಮಾರು ೩೦ ಕಿ.ಮೀ ದೂರದಲ್ಲಿರುವ ಹುಂಚಿಕೊಪ್ಪ ಎನ್ನುವ ಮಲೆನಾಡಿನ ಸೆರಗಿನಲ್ಲಿರುವ ಕುಗ್ರಾಮದಲ್ಲಿ. ಇದು ತನ್ನೂರಿನ ಮಣ್ಣಿನ ಮಗ ಕುವೆಂಪು ಅವರಿಗೆ ಹೊಸತಲೆಮಾರು ಸಲ್ಲಿಸಿದ ಗೌರವವೂ ಹೌದು. ಬೋದಿಸುವುದಷ್ಟೇ ತಮ್ಮ ಕೆಲಸ ಬೋದಿಸಿದ್ದನ್ನು ಪಾಲಿಸುವುದಲ್ಲ ಎಂದು ಎಲ್ಲರಂತೆ ಪತ್ರಕರ್ತರೂ ತಿಳಿದುಕೊಂಡಿರುವ ಕಾಲದಲ್ಲಿ ಸುಬ್ರಹ್ಮಣ್ಯ ಮತ್ತು ನಂದಿನಿ ನಿರ್ಧಾರ ಮಾದರಿಯಾಗಿದೆ. ಈ ಸಮಾರಂಭದಲ್ಲಿ ಮಂತ್ರಮಾಂಗಲ್ಯದ ವಚನ ಬೋಧನೆಯನ್ನು ನನ್ನಿಂದ ಮಾಡಿಸಿದ ಕುಟುಂಬದ ಹಿರಿಯರಿಗೆ ನಾನು ಕೃತಜ್ಞನಾಗಿದ್ದೇನೆ
No comments:
Post a Comment