Saturday, December 6, 2014
Monday, November 24, 2014
ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ‘’ನೂರಾರು ಕವನಗಳು’’
‘’ ನನಗೆ ಮುತ್ತುಕೊಟ್ಟ ಮೊಟ್ಟ ಮೊದಲ ಹುಡುಗಿಗೆ
ಮತ್ತು
ಮುತ್ತು ಕೊಡುವ ಕಟ್ಟ ಕಡೆಯ ಹುಡುಗಿಗೆ
ಅರ್ಪಣೆ ಈ ಹಾರು ಪದ್ಯಗಳು’’
ಮತ್ತು
ಮುತ್ತು ಕೊಡುವ ಕಟ್ಟ ಕಡೆಯ ಹುಡುಗಿಗೆ
ಅರ್ಪಣೆ ಈ ಹಾರು ಪದ್ಯಗಳು’’
- ಹೀಗೆಂದು ಹಿರಿಯ ಕವಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ತಮ್ಮ ‘’ನೂರಾರು ಕವನಗಳು’’ ಎಂಬ ಕವನ ಸಂಕಲನವನ್ನು ಅರ್ಪಣೆ ಮಾಡಿ ಬರೆದಿದ್ದರು. ಇಪ್ಪತ್ತೈದು ವರ್ಷಗಳ ಹಿಂದೆ ನಾನು ಧಾರವಾಡದಲ್ಲಿದ್ದಾಗ ಈ ಕವನ ಸಂಕಲನವನ್ನು ನನಗೂ ಕೊಟ್ಟಿದ್ದರು. ಆಗಷ್ಟೇ ಮದುವೆಯಾಗಿದ್ದ ನಾನು ಅರ್ಪಣೆಯ ಸಾಲುಗಳನ್ನು ಓದಿ ‘’’ಇವರು ಮೊದಲ ಮುತ್ತು ಕೊಟ್ಟ ಹುಡುಗಿಯನ್ನು ನೆನೆಸಿಕೊಳ್ಳುವ ಜತೆಯಲ್ಲಿ ಕೊನೆಯಲ್ಲಿ ಮುತ್ತುಕೊಡುವ ಹುಡುಗಿಯನ್ನೂ ಬುಕ್ ಮಾಡಿಕೊಂಡಿದ್ದರಲ್ವಾ? ಮೇಸ್ಟ್ರು ಭಲೇ ರಸಿಕರು’’ ಎಂದು ಮನಸ್ಸಿನಲ್ಲಿಯೇ ಅಂದು ಕೊಂಡು ಸುಮ್ಮಾನಾಗಿದ್ದೆ.ಕೆಲವು ತಿಂಗಳುಗಳ ನಂತರ ಪಟ್ಟಣಶೆಟ್ಟಿ ದಂಪತಿಗಳ ಜತೆ ಗದಗದಲ್ಲಿ ಸಾಹಿತ್ಯ ಕಾರ್ಯಕ್ರಮಕ್ಕೆ ಹೋಗಿದ್ದೆ. ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದವರು ನಾನು ವೈಯಕ್ತಿಕವಾಗಿ ಬಹಳ ಗೌರವಿಸುವ ಗದಗ ಡಂಬಳ ಮಠದ ಸ್ವಾಮೀಜಿಗಳು.
ಅವರು ಆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ‘’ ಪಟ್ಟಣಶೆಟ್ಟಿಯವರ ಕವನಗಳು ಮಾತ್ರವಲ್ಲ, ಅರ್ಪಣೆಯ ಸಾಲುಗಳು ಕೂಡಾ ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ವಾ? ಈ ಮೂಲಕ ಎಷ್ಟು ಚೆನ್ನಾಗಿ ಅವರು ತನ್ನ ಮಗಳು ಮತ್ತು ಮೊಮ್ಮಗಳನ್ನು ನೆನೆಸಿಕೊಂಡಿದ್ದಾರೆ’’ ಎಂದು ಹೇಳಿಬಿಟ್ಟರು. ಸ್ವಾಮೀಜಿ ಮಾತು ಕೇಳಿ ಅಲ್ಲಿಯೇ ಎದುರಿಗೆ ಕೂತಿದ್ದ ನಾನು ದಂಗಾಗಿ ಹೋಗಿದ್ದೆ. ನನ್ನ ದುಷ್ಟ ಆಲೋಚನಾ ಲಹರಿ ಬಗ್ಗೆ ನನಗೆ ಮುಖ ಮುಚ್ಚಿಕೊಳ್ಳಬೇಕೆನಿಸುವಷ್ಟು ನಾಚಿಕೆಯಾಗಿಬಿಟ್ಟಿತ್ತು.
- ‘’ಕಿಸ್ ಆಪ್ ಲವ್’’ ವಿವಾದವನ್ನು ವಿರೋಧಿಸುವವರು ಆ ಕಾರ್ಯಕ್ರಮವನ್ನು ತಮಗೆ ತೋಚಿದಂತೆ ಕಲ್ಪಿಸಿಕೊಂಡು ಪ್ರತಿಕ್ರಿಯಿಸಿ ಸುಖ ಪಡುತ್ತಿರುವುದನ್ನು ಕಂಡಾಗ ಈ ಹಳೆಯ ಘಟನೆ ನೆನಪಾಯಿತು.

Labels:
’ನೂರಾರು ಕವನಗಳು,
ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ
Tuesday, November 18, 2014
Saturday, November 15, 2014
ಮೂಡಬಿದಿರೆಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ ಕುರಿತು..
ತಿಂಗಳ ಹಿಂದೆ ಮೂಡಬಿದರೆಯಿಂದ ಮೋಹನ್ ಆಳ್ವ ಪೋನ್ ಮಾಡಿ ‘ನುಡಿಸಿರಿ’ಗೆ ಬರಬೇಕೆಂದು ಆಹ್ಹಾನಿಸಿದ್ದರು. ಇದು ಅವರು ನನಗೆ ಸತತವಾಗಿ ಮೂರನೇ ಬಾರಿ ನೀಡುತ್ತಿರುವ ಆಹ್ಹಾನ. ಕಳೆದ ಬಾರಿ ಮಂಗಳೂರಿನಲ್ಲಿ ನಡೆದ ‘ಜನನುಡಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾನು ಆಳ್ವರ ಬಗ್ಗೆ ಅವರಿಗಿಷ್ಟವಾಗದ ಮಾತುಗಳನ್ನು ಆಡಿದ್ದೆ. ಹೀಗಿದ್ದರೂ ಅವರೇ ಈ ಬಾರಿ ಪೋನ್ ಮಾಡಿ ಆಹ್ಹಾನಿಸಿರುವುದರ ಉದ್ದೇಶ ಅವರ ವಿಶಾಲ ಹೃದಯವನ್ನು ಪರಿಚಯಿಸುವುದೇ? ಸಾಮ-ದಾನ-ಭೇದ-ದಂಡದ ತಂತ್ರವೇ? ಇಲ್ಲವೇ ನಮ್ಮ ಹುಡುಗರು ತಮಾಷೆ ಮಾಡುತ್ತಿರುವಂತೆ ‘ಮೂಡಬಿದರೆ ಜಿಲೇಬಿ’ ಬಗ್ಗೆ ಆಸೆ ಹುಟ್ಟಿಸಿ ನನ್ನ ಸಂಯಮವನ್ನು ಪರೀಕ್ಷಿಸುವುದೇ? ನನಗೆ ಗೊತ್ತಿಲ್ಲ. ಏನಿದ್ದರೂ ಅವರ ಸೌಜನ್ಯದ ನಡವಳಿಕೆಗೆ ಥ್ಯಾಂಕ್ಸ್ ಹೇಳಲೇ ಬೇಕು.
ಹಿರಿಯ ಕವಿ ಸಿದ್ದಲಿಂಗಯ್ಯ, ಸಮಾಜವಾದಿ ಚಿಂತಕ ನಟರಾಜ ಹುಳಿಯಾರ್, ಇಷ್ಟದ ಹಾಡುಗಾರ ಜನ್ನಿ ಮೊದಲಾದ ಸ್ನೇಹಿತರಿಗೆ ನುಡಿಸಿರಿಯಲ್ಲಿ ಭಾಗವಹಿಸುತ್ತಿರುವ ಸುದ್ದಿ ಗೊತ್ತಾಯಿತು. ಆ ರೀತಿ ಭಾಗವಹಿಸುವ ಪೂರ್ಣ ಸ್ವಾತಂತ್ಯ್ರ ಅವರಿಗಿದೆ. ಅದನ್ನು ಪ್ರಶ್ನಿಸಲು ನಾವು ಯಾರು? ಆದರೆ ಕರಾವಳಿಯಲ್ಲಿ ಬೆಳೆಯುತ್ತಿರುವ ಕೋಮುವಾದದ ಬಗ್ಗೆ ಚರ್ಚೆ ನಡೆದಾಗ ಅಲ್ಲಿನ ‘ಒಳಗಿರುವ’ ಜಾತ್ಯತೀತರನ್ನು, ‘ಹೊರಗಿರುವ’ ಜಾತ್ಯತೀತರು ಪ್ರಶ್ನಿಸುವುದು ಮಾತ್ರ ಅಲ್ಲ, ಗೇಲಿಯೂ ಮಾಡುತ್ತಿರುತ್ತಾರೆ. ‘ಏನ್ರಿ ನೀವೆಲ್ಲ ಇದ್ದೂ ದಕ್ಷಿಣ ಕನ್ನಡದಲ್ಲಿ ಈ ರೀತಿಯ ಕೋಮುವಾದಿ ಚಟುವಟಿಕೆ ಬೆಳೆಯುತ್ತಿದೆಯಲ್ಲಾ?’ ಎಂದು ನನ್ನನ್ನೇ ಅನೇಕ ‘ಹೊರಗಿನ’ ಜಾತ್ಯತೀತರು ಮೂದಲಿಸುವ ದನಿಯಲ್ಲಿ ಪ್ರಶ್ನಿಸಿದ್ದುಂಟು.
ಇನ್ನು ಮುಂದೆ ಈ ರೀತಿ ಪ್ರಶ್ನಿಸುವ ಅಧಿಕಾರವನ್ನು ನನ್ನ ಕೆಲವು ಸ್ನೇಹಿತರಾದರೂ ಕಳೆದುಕೊಂಡಿರುವುದರಿಂದ ಈ ಮೂದಲಿಕೆಯ ಹಿಂಸೆಯಾದರೂ ಒಂದಿಷ್ಟು ಕಡಿಮೆಯಾಗಬಹುದೆಂಬ ಸಣ್ಣ ಸಮಾಧಾನ ನನಗೆ. ಇದರ ಜತೆಯಲ್ಲಿಯೇ ಬರಿ ಕಣ್ಣಿಗೆ ಕಾಣುವ ಕೆಲವು ಸತ್ಯಗಳು ಒಳಗಣ್ಣು ಇರುವ ನಮ್ಮ ಸ್ನೇಹಿತರಿಗೆ ಕಾಣುತ್ತಿಲ್ಲವಲ್ಲ ಎಂಬ ಸಣ್ಣ ಬೇಸರವೂ ಇದೆ. ಕೋಮುವಾದದ ದಾಳಿಯಲ್ಲಿ ಸೇನಾಪತಿಗಳು ತೆರೆಯಮರೆಯಲ್ಲಿರುತ್ತಾರೆ, ಅವರು ತೆರೆಯ ಮುಂದೆ ಬರುವಾಗ ಸಮಾಜ ಸುಧಾರಕರು, ಸಾಹಿತ್ಯ ಪ್ರೇಮಿಗಳು, ಆಧ್ಯಾತ್ಮಿಕ ಪುರುಷರು, ನಡೆದಾಡುವ ದೇವರುಗಳು ಆಗಿರುತ್ತಾರೆ.
ಇವರೇ ತೆರೆಯ ಹಿಂದೆ ಹೋಗಿ ನಿಂತು ಅಮಾಯಕ ಬಡ, ಹಿಂದುಳಿದ, ದಲಿತ ಯುವಕರನ್ನು ಕಾಲಾಳುಗಳಾಗಿ ಬಳಸಿ ಯುದ್ಧಕ್ಕೆ ದೂಡುತ್ತಾರೆ. ಸಾವು-ನೋವು ಅವರಿಗೆ, ಯುದ್ದದ ಗೆಲುವಿನ ಲಾಭ ಇವರಿಗೆ. ಕೋಮುವಾದದ ಈ ಜನಪ್ರಿಯ ಮೊಡೆಸ್ ಅಪರೆಂಡಿಯನ್ನು ನಮ್ಮಲ್ಲಿ ಅನೇಕರಿಗೆ ಇನ್ನೂ ಗೊತ್ತಾಗುತ್ತಿಲ್ಲವಲ್ಲಾ? ಇಲ್ಲ ಗೊತ್ತಿದ್ದೂ ಈ ರೀತಿ ಮಾಡುತ್ತಿದ್ದಾರೆಯೇ? ಕೋಮುವಾದದ ಮೂಲೋತ್ಪಾಟನೆಗೆ ಬದ್ಧರೆಂದು ಹೇಳಿಕೊಳ್ಳುವವರೆಲ್ಲರೂ ಮೊದಲು ತೆರೆಯಮರೆಯ ಮುಖಗಳನ್ನು ಅನಾವರಣಗೊಳಿಸಬೇಕೇ ವಿನ? ಬೀದಿಯಲ್ಲಿ ಬಡಿದಾಡುತ್ತಿರುವವರನ್ನು ದೂರುತ್ತಾ ಕೂರುವುದಲ್ಲ.
ಇಷ್ಟೆಲ್ಲ ಯಾಕೆ ಹೇಳಬೇಕಾಯಿತೆಂದರೆ ಮೂಡಬಿದರೆಗೆ ನಾನು ನನ್ನ ಅನೇಕ ಸ್ನೇಹಿತರಂತೆ ‘ಹೊರಗಿನವ’ನಲ್ಲ, ‘ಒಳಗಿನವ’. ನನ್ನೂರು ಮಟ್ಟು, ಮೂಲ್ಕಿ-ಮೂಡಬಿದರೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಒಂದು ಸಣ್ಣ ಕುಗ್ರಾಮ. ಈ ಕಾರಣದಿಂದಾಗಿಯೇ ಮೂಡಬಿದರೆಯ ರಾಜಕೀಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳು ಬಹುಷ: ಸಿದ್ದಲಿಂಗಯ್ಯ, ಹುಳಿಯಾರ್, ಜನ್ನಿ ಮೊದಲಾದ ಸ್ನೇಹಿತರಿಗಿಂತ ನನಗೆ ಸ್ವಲ್ಪ ಹೆಚ್ಚು ಗೊತ್ತು. ಇಂತಹ ವಿಷಯಗಳಲ್ಲಿ ಅಜ್ಞಾನಿಯಾಗಿರುವುದೇ ಒಳ್ಳೆಯದು ಎಂದು ಎಷ್ಟೋ ಬಾರಿ ನನಗನಿಸಿದೆ. ಹಾಳು ಜ್ಞಾನ ಎನ್ನುವುದು ಶಾಪ, ನಿದ್ದೆಗೆಡಿಸುತ್ತಾ ಇರುತ್ತದೆ.

Monday, October 6, 2014
ಡಿ.ಉಮಾಪತಿ ಅವರ ಕುರಿತು ಒಂದಿಷ್ಟು..
ಅತೀವವಾದ ಸಂಕೋಚ ಮತ್ತು ಹಿಂಜರಿಕೆ, ತನಗಾದ ಅನ್ಯಾಯವನ್ನು ಪ್ರತಿಭಟಿಸಲಾಗದಷ್ಟೂ ಔದಾರ್ಯ, ವಿರೋಧಿಗಳ ಮನಸ್ಸನ್ನು ನೋಯಿಸಲು ಇಷ್ಟಪಡದಷ್ಟು ವಿನಯವಂತಿಕೆ ಮೊದಲಾದ ತಮ್ಮ ಸಹಜ ಸ್ವಭಾವಗಳನ್ನೆಲ್ಲ ಪಕ್ಕಕ್ಕಿಟ್ಟು ಉಮಾಪತಿಯವ
ರು ದಿಟ್ಟತನದಿಂದ ಬರೆಯುತ್ತಿರುವುದನ್ನು ಕಂಡು ಸ್ನೇಹಿತನಾದ ನನಗೆ ಉಕ್ಕಿ ಬರುತ್ತಿರುವ ಸಂತೋಷವನ್ನು ತಡೆದುಕೊಳ್ಳಲಿಕ್ಕಾಗದೆ ಈ ಎರಡು ಸಾಲುಗಳನ್ನು ಬರೆಯುತ್ತಿರುವೆ. ನಾನು ಮತ್ತು ಉಮಾಪತಿ ದೆಹಲಿಯಲ್ಲಿ ಒಂಭತ್ತು ವರ್ಷಗಳ ಕಾಲ ಹೆಚ್ಚು ಕಡಿಮೆ ಜತೆಜತೆಯಲ್ಲಿಯೇ ಕಳೆದವರು. ದೆಹಲಿ ಬದುಕಿನ ಏಕಾಂಗಿತನ, ವೃತ್ತಿ ಬದುಕಿನ ಸಂಕಟಗಳು, ಕೌಟುಂಬಿಕ ಬದುಕಿನ ತಾಪತ್ರಯಗಳನ್ನೆಲ್ಲ ಮುಚ್ಚಿಟ್ಟುಕೊಳ್ಳದೆ ಹಂಚಿಕೊಂಡು ಇದ್ದವರು.
ವೃತ್ತಿ ಬಗೆಗಿನ ಬದ್ದತೆ, ಸಮಾಜದ ಬಗೆಗಿನ ಕಾಳಜಿ, ಸರಳತೆ, ಪ್ರಾಮಾಣಿಕತೆಯಲ್ಲಿ ನಮಗಿಬ್ಬರಿಗೂ ಹೆಚ್ಚಿನ ವ್ಯತ್ಯಾಸವಿಲ್ಲದಿದ್ದರೂ, ಉಮಾಪತಿಯವರ ಕನ್ನಡ ಭಾಷೆಯ ಮೇಲಿನ ಹಿಡಿತ,ಕನ್ನಡ ಸಾಹಿತ್ಯವೂ ಸೇರಿದಂತೆ ಅವರ ಓದಿನ ಹರವು ಮತ್ತು ಗ್ರಹಣ ಶಕ್ತಿಗೆ ನಾನು ಸಾಟಿಯಲ್ಲ. ನ್ಯಾಯಾಲಯಗಳ ಕಲಾಪ ವರದಿಯಲ್ಲಿ ಬಹುಷ: ಕನ್ನಡದ ಮಟ್ಟಿಗೆ ಅವರೇ ನಂಬರ್ ಒನ್,ಟು, ತ್ರಿ ಎಲ್ಲ. ಇದು ಎಷ್ಟೋ ಬಾರಿ ನನ್ನಲ್ಲಿ ಸಣ್ಣ ಅಸೂಯೆಯನ್ನೂ ಹುಟ್ಟಿಸಿದ್ದಿದೆ. ಇದು ನಾನು ಹೆಚ್ಚು ಓದುವಂತೆ ಮತ್ತು ನನ್ನ ಗ್ರಹಣ ಶಕ್ತಿಯನ್ನು ಇನ್ನಷ್ಟು ಹರಿತಗೊಳಿಸಲು ಪ್ರಯತ್ನಿಸುವಂತೆ ಪ್ರೇರೇಪಿಸಿದೆ. ಇದರಿಂದ ವೃತ್ತಿಯಲ್ಲಿ ಮುಖ್ಯವಾಗಿ ದೆಹಲಿಯ ನನ್ನ ವೃತ್ತಿ ಜೀವನದಲ್ಲಿ ನಾನೊಂದಿಷ್ಟು ಸಾಧನೆ ಮಾಡಿದ್ದರೆ ಅದರಲ್ಲಿ ಉಮಾಪತಿಯವರ ಪರೋಕ್ಷ ಪಾಲಿದೆ.
ಆದರೆ ಉಮಾಪತಿಯವರು ವರದಿ ಮಾಡುವುದನ್ನು ಬಿಟ್ಟರೆ ಲೇಖನ-ಅಂಕಣಗಳ ಸ್ವತಂತ್ರ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿಲ್ಲ ಎನ್ನುವುದು ನನಗೆ ಅವರ ಬಗ್ಗೆ ಇದ್ದ ಏಕೈಕ ಅಸಮಾಧಾನವಾಗಿತ್ತು. ಕನ್ನಡ ಪ್ರಭವನ್ನು ತೊರೆದು ವಿಜಯಕರ್ನಾಟಕಕ್ಕೆ ಸೇರಿದ ನಂತರ ಇದ್ದಕ್ಕಿದ್ದ ಹಾಗೆ ಅವರು ಎಲ್ಲ ಕಡಿವಾಣಗಳನ್ನು ಕಿತ್ತೊಗೆದವರಂತೆ, ಮುಕ್ತವಾಗಿ, ದಿಟ್ಟತನದಿಂದ ಬರೆಯುತ್ತಿರುವುದು ಕಂಡು ಅವರ ಬಗೆಗಿನ ಸಣ್ಣ ಅಸಮಾಧಾನವೂ ತೊಲಗಿ ಪ್ರೀತಿ ಇಮ್ಮಡಿಯಾಗಿದೆ.
ಬಹಳ ದಿನಗಳಿಂದ ಇದನ್ನೆಲ್ಲ ಬರೆಯಬೇಕೆಂದುಕೊಂಡವನು ಇಂದು ವಿಜಯ ಕರ್ನಾಟಕದ ಅವರ ಅಂಕಣ ಓದಿದ ನಂತರ ಬರೆಯಲೇ ಬೇಕೆನಿಸಿತು. ನನ್ನ ಯುವ ಪತ್ರಕರ್ತ ಮಿತ್ರರು ಅನೇಕ ಬಾರಿ ‘ನಮಗೆಲ್ಲಿದ್ದಾರೆ ರೋಲ್ ಮಾಡೆಲ್’ಗಳು? ಎಂದು ನನ್ನನ್ನು ಅಣಕಿಸುತ್ತಿರುತ್ತಾರೆ. ಅವರಿಗೆ ನನ್ನ ಪ್ರಾಮಾಣಿಕ ಉತ್ತರ: ಡಿ.ಉಮಾಪತಿ.

Monday, September 22, 2014
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವೆಬ್ ಸೈಟ್, ಫೇಸ್ ಬುಕ್, ಟ್ವೀಟರ್ ಹಾಗೂ ಯೂಟೂಬ್ ಖಾತೆಗೆ ಅಧಿಕೃತ ಚಾಲನೆ
![]() |
| ಅಂತರ್ಜಾಲದ ಬಿಡುಗಡೆ ಉದ್ದೇಶ ಮತ್ತು ಅವುಗಳ ಬಳಕೆಯ ಕುರಿತು ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಹೇಳುತ್ತಿರುವುದು. |
![]() |
| ಮುಖ್ಯಮಂತ್ರಿಯವರಿಂದ ಅಧಿಕೃತ ಚಾಲನೆ. ವಾರ್ತಾ ಸಚಿವ ರೋಷನ್ ಬೇಗ್, ಮುಖ್ಯಮಂತ್ರಿಯವರ ಅಪರ ಮುಖ್ಯಕಾರ್ಯದರ್ಶಿ ನರಸಿಂಹರಾಜು, ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು, ನಾಡಗೌಡ ಮೊದಲಾದವರು ಹಾಜರು. |
![]() |
| ಚಾಲನೆ ನೀಡಿದ ಕ್ಷಣ |
![]() | |
| ಅಂತರ್ಜಾಲದ ಕುರಿತು ವಿವರಣಿ ನೀಡುತ್ತಿರುವ ಸಾಮಾಜಿಕ ಜಾಲತಾಣದ ವಿಶೇಷ ಅಧಿಕಾರಿ ಶಿಶಿರ ರುದ್ರಪ್ಪ |
Labels:
ಟ್ವಿಟರ್,
ದಿನೇಶ್ ಅಮಿನ್ ಮಟ್ಟು,
ಫೇಸ್ ಬುಕ್,
ಮುಖ್ಯಮಂತ್ರಿ ಸಿದ್ಧರಾಮಯ್ಯ,
ಯೂಟೂಬ್
Sunday, September 14, 2014
ಫೇಸ್ ಬುಕ್ ಬಳಸುವವರಿಗಾಗಿ..
ಪ್ರೀತಿಯ ಗೆಳೆಯರೇ,
ಫೇಸ್ ಬುಕ್ ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಸಿ-ಬಿಸಿ ಚರ್ಚೆಗಳಿಂದ ನಾನು ಕಲಿತಿರುವ ಕೆಲವು ಪಾಠಗಳು ಇಲ್ಲಿವೆ. ಇದರಿಂದ ನನಗಿಂತ ಹಿರಿಯರಲ್ಲದೆ ಇದ್ದರೂ ಕಿರಿಯರಾದರೂ ಒಂದಿಷ್ಟು ಕಲಿಯಬಹುದೆಂಬ ನಿರೀಕ್ಷೆಯಲ್ಲಿ ದಾಖಲಿಸುತ್ತಿದ್ದೇನೆ.
1. ಫೇಸ್ ಬುಕ್ ಎಂದರೆ ಗೋಡೆ ಬರಹ ಇದ್ದ ಹಾಗೆ . ಜವಾಬ್ದಾರಿ ವಹಿಸಿಕೊಳ್ಳುವವರು ಯಾರೂ ಇಲ್ಲ. ಯಾರೂ ಎಲ್ಲಿಯಾದರೂ ಕದ್ದುಮುಚ್ಚಿ ಬರೆದುಬಿಡಬಹುದು. ತನ್ನ ಹೆಸರು ಬರೆಯದೆ ಇಲ್ಲವೆ ದುರ್ಬುದ್ದಿಯವರಾಗಿದ್ದರೆ ಬೇರೆಯವರ ಮೇಲೆ ಅನುಮಾನ ಮೂಡಿಸುವ ರೀತಿಯ ಸುಳ್ಳು ಹೆಸರನ್ನು ದಾಖಲಿಸಿ ಇಂತಹ ಬರಹಗಳನ್ನು ಬರೆಯಬಹುದು. ಆದ್ದರಿಂದ ಬರೆದವರ ಖಾತೆಯ ಮೂಲಕ್ಕೆ ಹೋಗಿ ಆತನ ಹಿಂದಿನ ಚಟುವಟಿಕೆಗಳನ್ನು ಪರಿಶೀಲಿಸಿ ಅದರ ನಂತರ ಆ ಬರಹದ ಬಗ್ಗೆ ಪ್ರತಿಕ್ರಿಯಿಸುವ ತೀರ್ಮಾನ ಕೈಗೊಳ್ಳುವುದು ಸೂಕ್ತ.

2.ಅವಸರದ ಪ್ರತಿಕ್ರಿಯೆ ಯಾವಾಗಲೂ ಅವಸರದ ವಾಹನಚಾಲನೆಯಂತೆ ಅಪಾಯಕಾರಿ, ಅಪಘಾತವಾಗುವ ಸಾಧ್ಯತೆಗಳೇ ಹೆಚ್ಚು. ನಂತರ ನೊಂದುಕೊಳ್ಳುವುದಕ್ಕಿಂತ ತನ್ನ ಬರಹ ಯಾರನ್ನು ಗುರಿಯಾಗಿಟ್ಟುಕೊಂಡಿದೆಯೋ ಅವರ ಸ್ಥಾನದಲ್ಲಿ ನಿಂತು ಯೋಚಿಸಿ ಬರೆಯುವುದು ಒಳಿತು. ಶತ್ರುಗಳು ಇರುವುದೇ ನಮ್ಮಿಂದ ನೋವು ತಿನ್ನುವುದಕ್ಕೆ, ಅವರನ್ನು ಬಿಟ್ಟಾಕಿ. ಆದರೆ ಮಿತ್ರರ ಮನಸ್ಸಿಗೆ ನೋವುಂಟು ಮಾಡಬಾರದು. ಸ್ನೇಹ ಅಮೂಲ್ಯವಾದುದು, ದಿನದಿಂದ ದಿನಕ್ಕೆ ನಿಜವಾದ ಸ್ನೇಹಿತರು ದುಬಾರಿಯಾಗುತ್ತಿದ್ದಾರೆ ಗೊತ್ತಿರಲಿ.
3. ಬಳಸುವ ಭಾಷೆಯ ಬಗ್ಗೆ ಎರಡು ಬಾರಿ ಯೋಚನೆ ಮಾಡಬೇಕು. ಜಾತಿ-ಧರ್ಮ, ಹೆಣ್ಣು-ಗಂಡು ಮೊದಲಾದ ಭಾವುಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವಾಗ ಇನ್ನಷ್ಟು ಎಚ್ಚರ ವಹಿಸಬೇಕು. ತಕ್ಷಣದ ಸಿಟ್ಟಿನ ಕೈಗೆ ಬುದ್ದಿ ಕೊಡಬೇಡಿ. ಬಾಣ ಕೈಯಿಂದ ಜಾರಿಹೋದ ನಂತರ ಅದು ನೇರವಾಗಿ ಗುರಿಯಿಟ್ಟವರ ಎದೆಯಲ್ಲಿ ನೆಟ್ಟುಬಿಡುತ್ತದೆ. ಎಲ್ಲರೂ ಅದನ್ನು ಕ್ಷಮಿಸುವಷ್ಟು ಉದಾರಿಯಾಗಿರುವುದಿಲ್ಲ.
4. ಟ್ಯಾಗ್ ಮಾಡಿದ ಬರಹಕ್ಕೆ ಇಲ್ಲವೇ ಯಾರದೋ ಪ್ರತಿಕ್ರಿಯೆ ರೂಪದ ಸ್ಟೇಟಸ್ ಬಗ್ಗೆ ಪ್ರತಿಕ್ರಿಯಿಸುವಾಗ ಎಚ್ಚರವಹಿಸುವುದು ಒಳ್ಳೆಯದು. ಮೂಲಬರಹವನ್ನು ಹುಡುಕಿ ಓದಿತಿಳಿದುಕೊಂಡು ಪ್ರತಿಕ್ರಿಯಿಸುವುದು ಜಾಣತನ. ಇಲ್ಲದೆ ಹೋದರೆ ಯಾರಿಗೋ ಬಿಡಬೇಕಾದ ಬಾಣ ಅನ್ಯಾಯವಾಗಿ ಇನ್ಯಾರಿಗೋ ತಗಲಿ ಘಾಸಿಯಾಗುವ ಸಂಭವ ಹೆಚ್ಚು.
5. ಇದೇ ರೀತಿ ಪ್ರತಿಕ್ರಿಯೆಗಳಿಗೆ ಪ್ರತಿಕ್ರಿಯೆ ಕೊಡುವಾಗ ಜಾಗರೂಕರಾಗಿಬೇಕು. ಒಮ್ಮೊಮ್ಮೆ ಪ್ರತಿಕ್ರಿಯಿಸುವವರು ಪೂರ್ವಗ್ರಹ ಪೀಡಿತರಾಗಿ ಮೂಲಬರಹದಲ್ಲಿನ ವಿಚಾರಗಳನ್ನು ನಿರ್ಲಕ್ಷಿಸಿ ತಮ್ಮ ಅಭಿಪ್ರಾಯಗಳನ್ನು ಮೂಲ ಬರಹಗಾರರ ಮೇಲೆ ಆರೋಪಿಸಿ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಇದರಿಂದಾಗಿ ಮೂಲಬರಹಗಾರ ಪ್ರತಿಕ್ರಿಯಿಸಿದ ತನ್ನ ಗೆಳೆಯರನ್ನೇ ತಪ್ಪಾಗಿ ತಿಳಿದುಕೊಳ್ಳುವ ಅಪಾಯ ಇದೆ.
6.ದಯವಿಟ್ಟು ಫೇಸ್ ಬುಕ್ ನಲ್ಲಿ ಸಕ್ರಿಯವಾಗಿರುವವರು ಮಾತ್ರ ವಿವಾದಗಳಿಗೆ ಪ್ರತಿಕ್ರಿಯಿಸಿ. ಅಪರೂಪಕ್ಕೊಮ್ಮೆ ಫೇಸ್ ಬುಕ್ ತೆರೆಯುವವರು ಅಲ್ಲಿರುವ ಯಾವುದೇ ಸ್ಟೇಟಸ್ ಗೆ ಪ್ರತಿಕ್ರಿಯಿಸಿದರೆ ಅನಾಹುತ ಖಂಡಿತ. ಅದರಿಂದ ದೂರ ಇರಿ. ಸಾಧ್ಯವಾದರೆ ಅವರಿಗೆ ನೇರವಾಗಿ ಮೇಲ್ ಮಾಡಿ ಬಿಡಿ ಇಲ್ಲವೆ ಮಾತನಾಡಿ .
7.ಭಾಷಣಗಳ ಬಗ್ಗೆ ಪ್ರಕಟವಾದ ವರದಿಗಳ ಬಗ್ಗೆ ಪ್ರತಿಕ್ರಿಯಿಸುವಾಗ ಇನ್ನೂ ಹೆಚ್ಚಿನ ಎಚ್ಚರ ವಹಿಸಬೇಕು. ಪತ್ರಕರ್ತರು ಸರ್ವಜ್ಞರಲ್ಲ ಅವರೂ ತಪ್ಪು ಮಾಡುತ್ತಾರೆ. ಕೆಲವು ಕಿಡಿಗೇಡಿಗಳು ದುರುದ್ದೇಶದಿಂದಲೇ ತಪ್ಪು ಮಾಡಿರುತ್ತಾರೆ. ಇಷ್ಟು ಮಾತ್ರ ಅಲ್ಲ, ಭಾಷಣಕಾರನ ಧ್ವನಿಯ ಏರಿಳಿತ, ನೀಡುವ ಒತ್ತು ಎಲ್ಲವನ್ನೂ ಬರಹ ರೂಪದಲ್ಲಿ ವರದಿ ಮಾಡಲಾಗುವುದಿಲ್ಲ. ವರದಿಯಾಗಿರುವ ಒಂದು ವಾಕ್ಯದ ಪೂರ್ವದಲ್ಲಿ ಇಲ್ಲವೆ ಕೊನೆಯಲ್ಲಿ ಇನ್ನೆರಡು ವಾಕ್ಯಗಳು ಇದ್ದಿರಬಹುದು. ಅದನ್ನು ವರದಿಗಾರ ಸದುದ್ದೇಶ ಇಲ್ಲವೆ ದುರುದ್ದೇಶದಿಂದ ಕೈಬಿಟ್ಟಿರಬಹುದು. ಇದರಿಂದ ಭಾಷಣಕಾರನ ಮೂಲ ಆಶಯ ವರದಿಯಲ್ಲಿ ವ್ಯಕ್ತವಾಗದೆ ಹೋಗಬಹುದು.
ಭಾಷಣಗಳಿಗೆ ಪ್ರತಿಕ್ರಿಯಿಸಲೇ ಬೇಕೆಂದಿದ್ದರೆ ಅಡಿಯೋ ಕ್ಲಿಪ್ಪಿಂಗ್ಸ್ ತರಿಸಿಕೊಂಡು ಕೇಳುವುದು ಇಲ್ಲವೆ ಸಭೆಯಲ್ಲಿ ಹಾಜರಿದ್ದ ಗೆಳೆಯರ ಜತೆ ತಿಳಿದುಕೊಳ್ಳುವುದು ಕ್ಷೇಮ.
- ಸದ್ಯಕ್ಕೆ ಕಲಿತದ್ದರಲ್ಲಿ ನೆನಪಿದ್ದ ಪಾಠಗಳಿಷ್ಟು, ಬದುಕು ನಿರಂತರವಾಗಿ ಪಾಠಗಳನ್ನು ಕಲಿಸುತ್ತಲೇ ಇರುತ್ತದೆ. ನಾನು ಕಲಿತಾಗಲೆಲ್ಲ ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ. ಇವೆಲ್ಲವೂ ನಿಮಗೆ ಗೊತ್ತಿರುವ ಪಾಠಗಳೇ ಆಗಿವೆ. ನೆನೆಪಿಸುವ ಪ್ರಯತ್ನವನ್ನಷ್ಟೇ ಮಾಡಿದ್ದೇನೆ. ನಮಸ್ಕಾರ
Sunday, August 24, 2014
ಅನಂತಮೂರ್ತಿಯವರಿಗೆ ಭಾವಪೂರ್ಣ ಶೃದ್ಧಾಂಜಲಿ
ಸಮಾಜದಲ್ಲಿ ದುಷ್ಟರಿಗಿಂತ ಸಜ್ಜನರ ಸಂಖ್ಯೆ ಹೆಚ್ಚು ಎನ್ನುವುದಕ್ಕೆ ಯಾವ ಗಣತಿಯನ್ನೂ
ನಡೆಸಬೇಕಾಗಿಲ್ಲ. ಹಾಗಿಲ್ಲದೆ ಹೋಗಿದ್ದರೆ ನಮ್ಮ ಸಮಾಜ ನಾವೆಲ್ಲ ಬದುಕುವಷ್ಟು
ಸಹನೀಯವಾಗುತ್ತಿರಲಿಲ್ಲ. ಆದರೆ ಬಹುಸಂಖ್ಯೆಯ ಸಜ್ಜನರು ಮೌನಧಾರಿಗಳು, ದುಷ್ಟರು ಮಾತ್ರ
ಕೂಗುಮಾರಿಗಳು. ಈ ಕಾರಣದಿಂದಾಗಿಯೇ ಒಂದಷ್ಟು ಜಾಗೃತ ಸಜ್ಜನರಿಗೆ ನಾವು ಒಂಟಿ, ಅಸಹಾಯಕರು
ಮತ್ತು ದುರ್ಬಲರು ಎಂದು ಅನಿಸಿಬಿಡುತ್ತದೆ. ಇದು ಹಲವಾರು ಬಾರಿ ಹತಾಶೆ, ಸಿನಿಕತೆ
ಮತ್ತು ಅತಿರೇಕದ ನಿಲುವುಗಳಿಗೆ ಪ್ರೇರಣೆಯಾಗುತ್ತಿದೆ.ಮೊನ್ನೆ ಸಂಜೆ ಹೆಚ್ಚು ಕಡಿಮೆ ನನ್ನ ಕಣ್ಣೆದುರೇ ಯು.ಆರ್.ಅನಂತಮೂರ್ತಿಯವರು ಸಾವಿನೆಡೆಗೆ ಸರಿದುಹೋದಾಗ ನಮ್ಮ ಆತ್ಮಸಾಕ್ಷಿಯ ಒಂದು ಬಹುದೊಡ್ಡ ಭಾಗ ಕೂಡಾ ಹೊರಟುಹೋಯಿತು ಎಂದು ಅನಿಸಿ ನನ್ನೊಡಲು ವಿಲವಿಲನೆ ಒದ್ದಾಡಿದ್ದು ಈ ಕಾರಣಕ್ಕೆ. ತಾನಾಡಿದ ಮಾತು ತಮ್ಮ ವಿರೋಧಿಗಳನ್ನು ಕೆರಳಿಸುತ್ತದೆ, ಅವರು ತಮ್ಮನ್ನು ಮಾನಸಿಕವಾಗಿ ಕುಗ್ಗಿಸಲು ನಾನಾಬಗೆಯ ಹೀನತಂತ್ರಗಳನ್ನು ನಡೆಸುತ್ತಾರೆ ಎಂದು ಅನಂತಮೂರ್ತಿಯವರಿಗೆ ಗೊತ್ತಿತ್ತು. ಮಾನಸಿಕವಾದ ಹಿಂಸೆ ದೈಹಿಕವಾಗಿಯೂ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರಿಗೆ ತಿಳಿದಿತ್ತು. ಹಾಗಿದ್ದರೂ ಅವರು ವಿವಾದಗಳನ್ನು ಆಹ್ಹಾನಿಸಿಕೊಂಡೇ ಬದುಕಿದರು.
ತಮ್ಮ ಹೇಳಿಕೆ ಕುರಿತಂತೆ ಸೃಷ್ಟಿಯಾಗಿರುವ ವಿವಾದದ ಬಗ್ಗೆ ಪತ್ರಕರ್ತರು ಪ್ರತಿಕ್ರಿಯೆ ಬಯಸಿದಾಗ ಅವರು ನನಗೆ ಪೋನ್ ಮಾಡುತ್ತಿದ್ದರು. ಅವರ ಅನಾರೋಗ್ಯದ ಸ್ಥಿತಿಯನ್ನು ನೋಡುತ್ತಾ ಬಂದ ನಾನು ‘
ನಮ್ಮ ಸಜ್ಜನ ಮೌನಧಾರಿಗಳೇನು ಕೆಟ್ಟವರಲ್ಲ, ಅವರು ಊರ ಉಸಾಬರಿ ನಮಗ್ಯಾಕೆ? ಎನ್ನುವ ಮನೋಭಾವದವರು, ಯಾವುದೇ ವಿಷಯ-ಘಟನೆ-ಬೆಳವಣಿಗಳ ಬಗ್ಗೆ ಅವರಲ್ಲಿ ಸ್ವಂತದ್ದೊಂದು ಅಭಿಪ್ರಾಯ ಇರುವುದಿಲ್ಲ. ಈ ಆರೋಪ ನಮ್ಮ ಬಹಳಷ್ಟು ಸಾಹಿತಿಗಳು ಮುಖ್ಯವಾಗಿ ಇತ್ತೀಚಿನ ತಲೆಮಾರಿನ ಸಾಹಿತಿಗಳ ಬಗ್ಗೆಯೂ ಇದೆ. ಅನಂತಮೂರ್ತಿಯವರ ಸಾವು ‘ತುಂಬಿಕೊಳ್ಳಲಾಗದ ನಷ್ಟ’ ಎಂದು ಅನಿಸುವುದು ಈ ಕಾರಣಕ್ಕೆ.
ಅನಂತಮೂರ್ತಿಯವರ ಸಾವಿನ ನಷ್ಟವನ್ನು ಭರಿಸುವುದಕ್ಕೆ ನಮ್ಮೆದುರು ಇರುವ ಏಕೈಕ ದಾರಿಯೆಂದರೆ ಸಜ್ಜನರೆನಿಸಿಕೊಂಡವರು ಮೌನದ ಕಂಬಳಿ ಕಿತ್ತೊಗೆದು ಮಾತನಾಡಲು ಶುರು ಮಾಡುವುದು. ಅನಂತಮೂರ್ತಿಯವರಂತೆಯೇ ಯಾವುದೇ ಟೀಕೆ-ಟಿಪ್ಪಣಿ, ಅಪಪ್ರಚಾರಕ್ಕೆ ಜಗ್ಗದೆ ತಮಗೆ ಸರಿ ಕಂಡದ್ದನ್ನು ಅಂಜದೆ, ಅಳುಕದೆ ಅಭಿವ್ಯಕ್ತಿಸುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಶ್ರದ್ದಾಂಜಲಿ. ಈ ಮೂಲಕವೇ ನಾವು ಅನಂತಮೂರ್ತಿಯವರನ್ನು ಜೀವಂತವಾಗಿಡಬೇಕಾಗಿದೆ, ಅವರಿಗಾಗಿ ಅಲ್ಲ, ನಮಗಾಗಿ.
ಕೊನೆ ಕ್ಷಣ: ಸಾವಿನ ಎರಡು ದಿನಗಳ ಹಿಂದೆ ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ದೇಹದ ತುಂಬೆಲ್ಲಾ ನಳಿಕೆಗಳನ್ನು ಪೋಣಿಸಿಕೊಂಡು ಮಲಗಿದ್ದ ಅನಂತಮೂರ್ತಿಯವರು ನನ್ನ ಕೈ ಹಿಡಿದು ‘ಮೈ ಬಾಡಿ ಈಸ್ ಫೈಟಿಂಗ್ ದಿನೇಶ್’ ಎಂದರು. ಆಗಲೂ ಅವರಿಗೆ ಅವರ ‘ಮೈಂಡ್’ನ ಆರೋಗ್ಯದ ಬಗ್ಗೆ ವಿಶ್ವಾಸ ಇತ್ತು. ಮಾನಸಿಕ ಶಕ್ತಿ ಮೂಲಕವೇ ದೇಹಕ್ಕೆ ತಗಲಿರುವ ರೋಗವನ್ನು ಗೆಲ್ಲಬಹುದೆಂಬ ಆತ್ಮ ವಿಶ್ವಾಸವನ್ನು ಅವರು ಹೊಂದಿದ್ದರು. ಅದು ಗೊತ್ತಿದ್ದ ನಾನು ‘ಯುವರ ಮೈಂಡ್ ಈಸ್ ಫೈಟಿಂಗ್ ಸರ್’ ಎಂದೆ. ನನ್ನ ಅಂಗೈಯನ್ನು ಅಮುಕಿ ನಕ್ಕರು. ಜೀವಂತವಾಗಿ ಅವರನ್ನು ನೋಡಿದ್ದು ಅದೇ ಕೊನೆ. ಎರಡು ದಿನಗಳ ನಂತರ ಹೋದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಎಷ್ಟೇ ಅನಾರೋಗ್ಯದಿಂದಿರಲಿ, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಲೇ ಇರಲಿ, ಅವರಲ್ಲಿಗೆ ಹೋದಾಗ ಮಾತನಾಡದೆ ಎಂದೂ ನನ್ನನ್ನು ವಾಪಸ್ ಕಳುಹಿಸುತ್ತಿರಲಿಲ್ಲ. ಸಾವಿನ ಹಿಂದಿನ ದಿನ ಹೋಗಿದ್ದಾಗ ಮಾತ್ರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅದರ ನಂತರ ಕಣ್ಣು ತೆರೆಯಲೇ ಇಲ್ಲ. ಮೌನಹೊದ್ದು ಮಲಗಿದ್ದ ಅನಂತಮೂರ್ತಿಯವರನ್ನು ನಾನು ನೋಡಲೇ ಬಾರದಿತ್ತು. ನನ್ನೊಡನೆ ಮಾತನಾಡಿದ್ದ ಅನಂತಮೂರ್ತಿಯವರ ಭೇಟಿಯೇ ಕೊನೆಯದಾಗಬೇಕಿತ್ತು ಎಂದು ತೀವ್ರವಾಗಿ ಅನಿಸುತ್ತಿದೆ. ಮೌನಿ ಅನಂತಮೂರ್ತಿಯವರನ್ನು ನಾನು ಊಹಿಸಿಕೊಳ್ಳುವುದೂ ಸಾಧ್ಯ ಇಲ್ಲ..
ಹೋಗ್ಲಿ ಬಿಡಿ ಸಾರ್, ವಿವಾದ ಬೆಳೆಸಲು ಹೋಗಬೇಡಿ, ಸುಮ್ಮನೆ
ನಿಮಗೆ ಕಿರಿಕಿರಿ’ ಎನ್ನುತ್ತಿದ್ದೆ. ಆದರೆ ಮರುಕ್ಷಣದಲ್ಲಿಯೇ ಯಾವುದಾದರೂ ಟಿವಿ ಚಾನೆಲ್
ನಲ್ಲಿ ಅವರ ಸಂದರ್ಶನ ಪ್ರಸಾರವಾಗುತ್ತಿತ್ತು. ಇದು ಅನಂತಮೂರ್ತಿ. ಅವರ ಹೇಳಿಕೆಗಳನ್ನು
ನೋಡಿ ಕೆಲವರು ಅವರನ್ನು ಪ್ರಚಾರಪ್ರಿಯರು ಎಂದು ಟೀಕಿಸಿದ್ದೂ ಉಂಟು. ಆದರೆ
ಪ್ರಚಾರಪ್ರಿಯರು ತಮಗೆ ಹಿತವಾದುದೇ ಪ್ರಚಾರವಾಗಲಿ ಎಂದು ಬಯಸುತ್ತಾರೆ, ಯಾವ
ಪ್ರಚಾರಪ್ರಿಯ ಅನಂತಮೂರ್ತಿಯವರಂತೆ ‘ಹೇಟ್ ಕ್ಯಾಂಪೇನ್’ಗೆ ತಮ್ಮನ್ನು ಒಡ್ಡಿಕೊಳ್ಳಲು
ಇಷ್ಟಪಡುತ್ತಾರೆ?
Sunday, August 10, 2014
ಉಡುಪಿ ಜಿಲ್ಲೆಯ ಪತ್ರಕರ್ತರ ಜೊತೆಯಲ್ಲಿ..
Thursday, July 3, 2014
Media advisor to Karnataka CM visits Kannadiga journalists association
News and pics: Rons Bantwal
Daijiworld Media Network- Mumbai (EP)
Mumbai, June 3: “It is sad that many newspapers have closed down as they were being sold at a low cost. It is necessary to encourage the minor regional newspapers. Media should be pro people. Journalists should be the hope of the masses instead of misleading them," said senior journalist and media adviser to the Chief Minister Dinesh Amin Mattu.
"You are bound to succeed if you proceed believing in the history of journalism. While reading is the strength of journalists, questions
are their weapon. However stay away from asking questions in a taunting manner," he added.
Dinesh Amin spoke during his visit to the association of Kannadiga journalists at Santa Cruz east on Saturday morning May 31.
In the meeting presided by Chandrashekar Palethady, president of Kannadiga Journalist's association, senior journalists and columnists
Ravi R Anchan, Gregory L Almeida advisor to the association and businessman Sudhakar Uchil were present on the dais. Paledthady and
other office bearers lauded several decades of service by Dinesh Mattu and felicitated him with a shawl, memento and a bouquet.
"The work of giving suggestions is being considered as a work of revenge these days. In these circumstances, it is heartening to see the
association of journalists recognizing my service of giving suggestions and correcting the society. The land of Mumbai is known
for adventure. It is also a land that gives success to those who struggle. It is ideal for the common man. People prefer such places. It
is a matter of pride to know of an association that is indulged in loving and serving Tulu-Kannadigas. The people here are unity oriented
and they are proceeding with social responsibility," he said.
"In this age when newspapers are unable to be pro readers and people, they owe something to the readers. While only courts and media can create opposition force, newspapers should inform the truth. They should not be sold as a means of misleading information. They should not be controlled by paid news channels. You can contact me for healthy discussions on Maharastra-Karnataka state's media colleagues," he added.
"It is a matter of pride that the association is active for the betterment of journalists. It should develop the novelty in journalism and new journalists. It should think of the middle class people. Let the association identify thoughts on a grass root level and be service oriented," he concluded.
Chandrashekar Palethady in his presidential address emphasized on the need for a newspaper bhavan for the activities of the association.
Rons Bantwal, the honorary secretary gave an introductory speech saying, "May 31, 2014 is a memorable day for the Mumbai- Kannadiga journalism. Well known journalist, columnist and media adviser of Chief Minister Siddaramaiah, Dinesh Amin Mattu has visited the Patrika Bhavan of the Sangha on his own. Mattu was born in Hejmady and passed his primary and high school education there amidst poverty."
Sangha secretary Harish K Hejmady welcomed and compeered the programme. Working committee member Sham M Hande proposed the vote of thanks. Joint secretary Pramnath B Shetty Mundkoor, committee member Gurudatt Poonja Mundkoor, sports committee president Jaya C Bhandary, Vishwanath Amin Niddodi, Ramesh Udyavara, Sridhar Uchil, S Daya, Harry R Sequeira, Arif Kalkatta and Vasanth Poojary were present and participated in the questions and answer session.
(Source: Daijiworld webiste)
|
Friday, November 22, 2013
21 ನವೆಂಬರ್ 2013ರಂದು ಮಂಗಳೂರು ವಿವಿಯ ಕನಕದಾಸ ಅಧ್ಯಯನ ಪೀಠದ 10ರ ಸಂಭ್ರಮ ಹಾಗೂ "ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ" ದ ಸಂವಾದ ಕಾರ್ಯಕ್ರಮ
Labels:
Dinesh Amin Mattu,
Kanaka research centre,
Mangalore University,
Media Advisor to CM,
MP Umesh chandra,
TC Shivashankar murthy,
VC
Wednesday, November 20, 2013
Tuesday, October 29, 2013
Monday, October 28, 2013
Subscribe to:
Posts (Atom)